ನೀತಿ ಕಥೆ - ಅಹಂಕಾರದ ಕತ್ತೆ



ಒಂದು ಊರಿನಲ್ಲಿ ಒಬ್ಬ ಅರಸನಿದ್ದ. ಅವನು ತನ್ನ ಬಟ್ಟೆ ಹೊತ್ತೊಯ್ಯಲು ಒಂದು ಕತ್ತೆಯನ್ನಿಟ್ಟುಕೊಂಡಿದ್ದ ಅದು ಅಗಸನ ಕೆಲಸವಾದ ಕೂಡಲೇ ಸನಿಹದ ಅರಣ್ಯಕ್ಕೆ ಹೋಗಿ ಮನಸೋಕ್ತ ಹುಲ್ಲು ಮೇಯ್ದು ಪುನಃ ರಾತ್ರಿಗೆ ಅಗಸನ ಮನೆಗೆ ಬರುತ್ತಿತ್ತು.

ಒಂದು ದಿನ ಕತ್ತೆ ಹುಲ್ಲು ಮೇಯುತ್ತಿದ್ದಂತೆ ಕತ್ತೆತ್ತಿ ನೋಡಿತು, ನೆರಳೇ ತಾನೆಂದು ಭಾವಿಸಿತು - "ನಾನು ಈಗ ಇಪ್ಪತ್ತಡಿ ಎತ್ತರ ಹದಿನೈದಡಿ ಅಗಲವಾಗಿ ಒಂದು ಬಲಿಷ್ಠ ಆನೆಯಂತಾಗಿದ್ದೇನೆ. ಈಗ ನಾನು ಅರಣ್ಯದ ಯಾವ ಪ್ರಾಣಿಗಳಿಗೂ ಅಂಜುವದಿಲ್ಲ ಅವರೇ ನನ್ನನ್ನು ನೋಡಿ ಭಯದಿಂದ ದೂರ ಓಡಿಹೋಗಬೇಕು" ಎಂದು ಗರ್ವದಿಂದ ತಲೆ ಎತ್ತಿ ಕೆಟ್ಟ ಧ್ವನಿಯಿಂದ ಆರಣ್ಯವೆಲ್ಲ ಕೀಸರಿಡುವಂತೆ ಕಿರುಚತೊಡಗಿತು.

ಕತ್ತೆಯ ಕೀಸರ ಧ್ವನಿಯಿಂದ ಅರಣ್ಯದಲ್ಲಿ ಮಲಗಿದ್ದ ಒಂದು ಸಿಂಹದ ಮರಿಗೆ ಎಚ್ಚರವಾಯಿತು. ಆರಣ್ಯಕ್ಕೇನೋ ಗಂಡಾಂತರ ಬಂದಿದೆ ಎಂದು ಅದು ಸಾವಕಾಶವಾಗಿ ಬಂದು ಕತ್ತೆಯ ಎದುರಿಗೇ ನಿಂತಿತು.

ಅಹಂಕಾರದಿಂದ ಎದೆಸೆಟಿಸಿ ನಿಂತ ಕತ್ತೆಯು ಸಿಂಹದಮರಿಗೆ ಹೆದರದೆ ತನ್ನ ಉದ್ದ ಮೂತಿಯಿಂದ ಕೆಣುಕತೊಡಗಿತು, ತನ್ನೆದುರು ಎತ್ತರವಾಗಿ ನಿಂತ ಕತ್ತೆಯನ್ನು ನೋಡಿದ ಸಿಂಹದ ಮರಿಯೂ ತುಸು ಹಿಂದೆ ಸರಿಯಿತು ಕತ್ತೆಯ ಅಹಂಕಾರ ಹೆಚ್ಚಿತು. ನಾನು ಈಗ ಬಲಶಾಲಿ, ಆದ್ದರಿಂದಲೇ ಈ ಸಿಂಹದ ಮರಿ ಹೆದರಿ ಹಿಂದೆ ಸರಿಯತೊಡಗಿದೆ ಎಂದು ಅದು ಪುನಃ ಮುಂದೆ ಬಂದಿತು. ಕತ್ತೆಯ ರೂಪವನ್ನು ನೋಡಬೇಕೆಂದು ಸಿಂಹದ ಮರಿಯು ಅದರ ಹಿಂಭಾಗಕ್ಕೆ ಬಂದಿತು ಕತ್ತೆ ತನ್ನ ಚಾಳಿ ಬಿಡಲಿಲ್ಲ. ಎರಡೂ ಕಾಲೆತ್ತಿ ಒದೆಯಿತು.
ಸಿಂಹದ ಮರಿ ಚಿಕ್ಕದಿದ್ದರೇನಾಯಿತು, ಅದೂ ತನ್ನ ರೂಪ ತೋರಿಸಿತು, ಒಮ್ಮೆಲೆ ಜಿಗಿದು ಅದರ ಗಂಟಲನ್ನು ಹಿಡಿದು ಪಂಜರದಿಂದ ಹರಿದು ಕೊಂದು ರಕ್ತ ಹಿರಿತು.


ನೀತಿ :
ಅಲ್ಪರಿಂದ ಐಶ್ವರ್ಯ, ಕೀರ್ತಿ, ಮಾನ - ಸನ್ಮಾನ ಪಡೆದಾಗ ಅವನು ತನ್ನ ಯೋಗ್ಯತೆ ಮರೆತು ಅಹಂಕರಿಯಾಗುತ್ತಾನೆ. ಆಗಲೇ ಅವನು ತನ್ನ ನಾಶದೆಡೆಗೆ ಸಾಗುವನು.....